Video | ಚಿಕ್ಕಕಲ್ಲಸಂದ್ರ: ಕೆರೆಯ ಕುರುಹೂ ಇಲ್ಲ! Chikkalasandra lake encroached

2022-03-14 7

ಕೆರೆಯೊಂದನ್ನು ಎಷ್ಟು ವ್ಯವಸ್ಥಿತವಾಗಿ ಒತ್ತುವರಿ ಮಾಡಿಕೊಳ್ಳಬಹುದು ಎಂಬುದನ್ನು ನೋಡಲು ನೀವು ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿರುವ ಚಿಕ್ಕಕಲ್ಲಸಂದ್ರಕ್ಕೆ ಬರಬೇಕು. ಇಲ್ಲೊಂದು ಕೆರೆ ಇತ್ತು ಎಂಬುದರ ಕುರುಹೂ ಇಲ್ಲದಂತೆ ಇದನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಹೈಕೋರ್ಟ್‌ ಆದೇಶದ ನಂತರವೂ ಒತ್ತುವರಿದಾರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರುತ್ತಾರೆ.